Friday 23 October 2015

ಹೆಣ್ಣು-10



         ಮೊನ್ನೆ ಒಂದು ವ್ಯಾಟ್ಸಾಪ್ ವೀಡಿಯೋ ನೋಡಿದೆ. ಅದು ಐದು ನಿಮಿಷದ ಒನ್ ಲೈನ್ ಸ್ಟೋರಿಯಂತೆ ಸಮಾಜದಲ್ಲಿ ಈಗ ಆಗುತ್ತಿರುವ ಅತ್ಯಾಚಾರ ಅನಾಚಾರವನ್ನು ತೋರಿಸುವ ಮತ್ತು ದಾರಿತಪ್ಪುತ್ತಿರುವ ಇಂದಿನ  ಹದಿ ಹರೆಯದ ಹುಡುಗಿಯರಿಗೆ ಅರಿವು ಮೂಡಿಸುವ ಒಂದೊಳ್ಳೆ ವೀಡಿಯೋ ಎನ್ನುವುದರಲ್ಲಿ ಎರಡು ಮಾತಿಲ್ಲ...


ಸ್ಟೋರಿ ಹೀಗಿತ್ತು...
      ಹೈಸ್ಕೂಲು ಓದುವ ಹುಡುಗಿ.  ಓದು ತುಂಬಾ ಚೆನ್ನಾಗಿಯೇ ನಡೆಯುತ್ತಿತ್ತು. ಎಲ್ಲವುದರಲ್ಲೂ ಮುಂದಿದ್ದಳು. ಆದರೆ ಅಚಾನಕ್ಕಾಗಿ ಮನೆಯವರು ತೆಗೆದುಕೊಟ್ಟ ಮೊಬೈಲ್‍ನ ಮಿಸ್ ಕಾಲ್‍ಗೆ ಮುಗಿಬಿದ್ದ ಹುಡುಗಿ, ತನ್ನಲ್ಲಿರುವ ಉಳಿದ ಆಸಕ್ತಿಯನ್ನೆಲ್ಲಾ ಕಳೆದುಕೊಂಡು, ನಿಧಾನವಾಗಿ ಮಿಸ್ ಕಾಲ್ ನಲ್ಲಿ ಪರಿಚಯವಾದ ಹುಡುಗನ ಬಣ್ಣಬಣ್ಣದ ಮಾತಿಗೆ ಮರುಳಾಗಿ ಲವ್ ಎನ್ನುವ ಪಾಶಕ್ಕೆ ಬೀಳುತ್ತಾಳೆ.
ಒಂದು ದಿನ ಬೆಳಿಗ್ಗೆ ತುಂಬಾ ಅಸಹ್ಯಕರವಾದ ಅಶ್ಲೀಲ ಪೋಟೋಗೆ ಇವಳ ಮುಖವನ್ನು ಎಡಿಟ್ ಮಾಡಿ, ನೀನು ನಾ ಹೇಳಿದಲ್ಲಿಗೆ ಬರಬೇಕು ಇಲ್ಲವೆಂದರೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ನಿಮ್ಮ ಮನೆಯವರೆಲ್ಲರಿಗೂ ಈ ಫೋಟೋವನ್ನು ಸೆಂಡ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್‍ಗೆ ಇಳಿಯುತ್ತಾನೆ. ಲೈಂಗಿಕ ಉಪಯೋಗಕ್ಕಾಗಿ ಅವಳನ್ನು ಬಳಸಿಕೊಳ್ಳುವ ಆ ಧಂಧೆಗೆ ಇಳಿಸುವ,ಯಾವುದೋ ಹೊರ ಪ್ರಪಂಚಕ್ಕೆ ಕಿಡ್ನಾಪ್ ಮಾಡಿ ಮಾರಾಟ ಮಾಡುವ ಇರಾದೆ ಅವನದ್ದಾಗಿತ್ತು. ಆ ಫೋಟೋಗಳನ್ನು  ನೋಡಿದ ಹುಡುಗಿ ಹೆದರಿ ಮನೆಯವರಿಗೆ ತಿಳಿದರೆ ಸಾಯಿಸುತ್ತಾರೆ, ಪ್ಲೀಸ್ ಹಾಗೆ ಮಾಡದಿರು ನೀವು ಹೇಳಿದಲ್ಲಿಗೆ ಬರುತ್ತೆನೆಂದು ತಿಳಿಸಿದ ವಿಳಾಸದ ಕಡೆ ಹೊರಡುತ್ತಾಳೆ. ಆದರೆ ದಾರಿಮಧ್ಯೆ ಅವಳು ತಲುಪಬೇಕಾದ ವಿಳಾಸ ತಿಳಿಯದೇ ಪರದಾಡುತಿದ್ದಾಗ, ಅದೇ ಮಾರ್ಗವಾಗಿ ಬಂದ ಅವಳ ಸ್ಕೂಲ್ ಟೀಚರ್ ಅವಳನ್ನು ಇಲ್ಲೇನು ಮಾಡುತ್ತಿರುವೆ ಎಂದು ಗದರಿಸಿ ವಿಷಯತಿಳಿದು, ಕೂಪಕೃತ್ಯದ ಬಾಯಿಂದ ಪಾರು ಮಾಡಿಸಿ, ಧೈರ್ಯ ಹೇಳಿ ಮನೆಗೆ ಕಳುಹಿಸುತ್ತಾರೆ.
ವಿಚಾರ ಇಷ್ಟೆ ಆದರೂ ವೀಡಿಯೋ ನೋಡುತ್ತಾ ಹೋದರೆ ನಿಜಕ್ಕೂ ಮನ ಕಂಪಿಸುತ್ತದೆ. ಕುರುಡು ಪ್ರೇಮದ ಅಮಲಿನಲ್ಲಿ ಎಷ್ಟೋ ಜನ ಹುಡುಗಿಯರು, ತಮ್ಮ ಪ್ರೇಮಿಯು ಎದುರು ತೋರುವ ಉತ್ತಮ ಗುಣಗಳನ್ನು ಮಾತ್ರವೇ ಕಂಡು ಯಾಮಾರುತ್ತಾರೆ. ಎಷ್ಟೋ ಕಡೆ ಸ್ಫುರದ್ರೂಪಿ ಯುವಕರು ತಮ್ಮ ಸೌಂದರ್ಯವನ್ನೇ ಬಂಡವಾಳವನ್ನಿಟ್ಟುಕೊಂಡು ಹುಡುಗಿಯರ ಜೊತೆ ಆಟವಾಡಿ, ಅತೀವ ಬುದ್ಧಿವಂತಿಕೆಯಿಂದ ತಮ್ಮ ಆಸೆ ಅಕಾಂಕ್ಷೆಗಳನ್ನೆಲ್ಲಾ ಈಡೇರಿಸಿಕೊಂಡ ಮೇಲೆ ವಿಳಾಸ ತಿಳಿಯದಂತೆ ಮಾಯವಾಗುತ್ತಾರೆ. ಹೆಣ್ಮಕ್ಕಳೇ ಆದಷ್ಟು ಎಚ್ಚರವಿರಿ, ನೀವು ನಂಬಿರುವ ಪ್ರೀತಿ, ಮೋಸದಿಂದಲೂ ಕೂಡಿರಬಹುದು. ಯಾವುದೇ ಹೆಜ್ಜೆ ಇಡುವುದಕ್ಕೆ ಮುನ್ನ ಯೋಚಿಸಿ, ಚಿಂತಿಸಿ ಮುನ್ನಡೆಯಿರಿ.
ಇಂತಹ ಸ್ಟೋರಿಯ ವೀಡಿಯೋಗಳು ನಮ್ಮ ನಿಜ ಜೀವನದಲ್ಲಿ ದಿನಾಲೂ ನೋಡುತ್ತಿದ್ದರೂ ಎಂದೂ ಅವುಗಳ ಬಗ್ಗೆ ಚಿಂತಿಸುವುದಿಲ್ಲ. ಮೊದಲು ನಾವು ಒಳ್ಳೆಯವರಾಗೋಣ. ಕೆಲವೊಂದನ್ನು ಹೇಳುವುದರಿಂದಲೂ ಬದಲಾಯಿಸÀಲು ಸಾಧ್ಯವಿಲ್ಲ. ತಮ್ಮನ್ನು ತಾವು ಅರಿತಾಗಲೇ ಬದಲಾವಣೆ ಸಾಧ್ಯ. ಹೆಣ್ಮಕ್ಕಳೇ ಗೊಡ್ಡು ನಂಬಿಕೆ, ಮೊಬೈಲ್ ಪ್ರೀತಿಯನ್ನು ನಂಬದಿರಿ. ಎಂಜಾಯ್ ಮೆಂಟ್‍ಗಾಗಿ ಈ ಕ್ಷಣವನ್ನು ಮರೆಯದಿರಿ. ದಾರಿ ತಪ್ಪದಿರಿ. ಕ್ಷಣಿಕ ಸುಖಕ್ಕಾಗಿ ಹಾತೋರೆದು ಬಂಗಾರದ ಬಾಳನ್ನು ಕೈತಪ್ಪಿಸಿಕೊಳ್ಳದಿರಿ. ಜಾಗೃತಿ ವಿಚಾರ ಮೂಡಿಸುವ ಆ ವೀಡಿಯೋ ಮಾಡಿ ಕಳುಹಿಸಿದವನಿಗೆ ನನ್ನದೊಂದು ಸಣ್ಣ ಸಲಾಮ್...

No comments:

Post a Comment