Friday 31 August 2018

ಶೂನ್ಯ ಏಕಾಂತ:



ತಲೆ ಕೆಡುತ್ತೆ!.. ಏನಿದರ ಅರ್ಥ!!, ಏನಿದೆ ಇದರಲ್ಲಿ!, ಜಗತ್ತು ನಮ್ಮದಲ್ಲದಿದ್ದರೂ ಅದು ನನ್ನದು, ಇದು ನನ್ನದು ಎಂದು ಹಾಕಿಕೊಂಡಿರುವ ಬೇಲಿ, ಬದುಕು, ಭಾವನೆ, ಕುರುಣೆ, ಸಂಬಂಧಗಳು, ಕಾರ್ಮೋಡಗಳು, ಭೂಮಿ, ಭಾನು, ಮಳೆ, ಚಳಿ, ಬಿಸಿಲು, ಬಾಗುವ ವಯಸ್ಸು, ಧಗಧಗಿಸುವ ದುಡ್ಡು, ಹಪಹಪಿಸುವ ಕಾಮ, ಅವಳ್ಯಾರದೋ ಟೈಟೆಡ್ ಲೆಗ್ಗಿಂಗ್ ತಳುಕು, ಪ್ರಿÃತಿ, ಚಟ, ಚಟ್ಟ, ತಮ್ಮ ಸುಖಕ್ಕಾಗಿ ಹೆತ್ತವರನ್ನ ರೋಡಲ್ಲಿ ಮಲಗಿಸುವ ಆಸೆ ಬುರುಕ ಮಕ್ಕಳ ಮನಸ್ಸು, ಗಾಳಿಯಲ್ಲಿ ತೇಲಾಡುವ ಹಕ್ಕಿ, ಕೂಳಿಗೂ ಗತಿಯಿಲ್ಲ ಎಂದು ನಾರುವ ಐನಾತಿ ಮೈಗಳ್ಳರು, ಸÀನ್ಯಾಸಿಯಾದವನು ದುಡಿದು ಹರಿಸುತ್ತಿರುವ ಹಣದ ಹೊಳೆ, ಎಷ್ಟೆÃ ಕೆಲಸ ಮಾಡಿದರೂ ಮೌಲ್ಯವೇ ಅರಿಯದೆ ಅಣಕಿಸುವ ಬಾಸ್ ಮಹಾಶÀಯರು, ಇನ್ನೊಬ್ಬರ ನೋವನ್ನು ಅರಿಯದ ಕುಬೇರರು, ದುಡ್ಡಿಗೆ ಕಣ್ಣಿಟ್ಟು ತೀರ್ಥ ನೀಡುವ ಅರ್ಚಕರು, ಕಂಗೆಡುವಂತೆ ಮಾಡುವ ಕೀಚಕರು, ರೆಡ್ ಲೈಟ್ ಏರಿಯಾದಲ್ಲಿ ದುಡ್ಡಿಗೆ ಮಲಗುವ ಸೂಳೆಯರು, ಲಾಂಗ್ ರನ್ ನಿರೀಕ್ಷೆಯಿಟ್ಟು ದುಡಿಯವ ಹಳ್ಳಿ ರೈತರು, ಕ್ಷಣಿಕ ಸುಖಕ್ಕಾಗಿ ಸೆರಗೊಡ್ಡುವ, ಪಂಚೆ ಸಡಿಲಿಸುವ ಕಾಮ ಬಾಕರು, ಎರಡೆರಡು ಪ್ರಿÃತಿಗೆ ಬಿದ್ದು ಅದೂ ಬಿಡಲಾಗದೆ, ಇದೂ ಹಿಡಿಯಲಾಗದೆ ಒದ್ದಾಡುವ ಪ್ರೆÃಮಿಗಳು, ಕುರ್ಚಿಯೇ ದೇವರೆನ್ನುವ ರಾಜಕಾರಣಿಗಳು, ರಕ್ತ ಹೀರುವ ರೌಡಿಗಳು, ಪ್ರಪಂಚ ಏನೂ ಅರಿಯದೇ ಕಿಲ ಕಿಲ ನಗುವ ಈಗತಾನೆ ಹುಟ್ಟಿರುವ ಮಗು. ಬದುಕೇ ಬೆತ್ತಲೆಂದರೂ, ಬೆತ್ತಲಲ್ಲಿ ಬಹುಬಗೆಯಲ್ಲಿ ಮಿಂದೆದ್ದದ್ದರೂ, ಹೊರಗೆ ತಾ ಮರ್ಯಾದಸ್ತ ಎಂದು ತೋರ್ಪಡಿಕೆ ಕಾಣುವ ತರುಣ-ತರುಣಿಯರ ಆಟಗಳು, ದೇವರ ನಂಬಿಕೆಯಲ್ಲಿ ಅವನನ್ನು ಕಾಣಲು ದೇವಸ್ಥಾನಕ್ಕೆ ಓಡುವ ಆಸ್ತಿಕರು, ಮನದಲ್ಲಿ ಕೆಂಡವಿಟ್ಟುಕೊಂಡು, ಹೊರ ಜನರಿಗೆ ತಾ ಬೆಣ್ಣೆ ಎಂದು ಬೀಗುವವರು, ಆ ಕಡೆ ಓಶೋ ತತ್ವ, ಈ ಕಡೆ ವಿವೇಕಾನಂದ ಸಾರತ್ವ, ಮತ್ತೊಂದೆಡೆ ನಿತ್ಯಾನಂದನ ಬಹುತ್ವ.., ಹೀಗೆ ಎಲ್ಲವೂ ಏಕೋ ಏಕಾಂತದಲ್ಲಿದ್ದಾಗ ಹೆಚ್ಚಾಗಿ ಕಾಡಿ, ಯಾವುದು ಸತ್ಯ!?, ಯಾವುದು ಮಿಥ್ಯ!?, ಯಾವುದು ಅನಂತ!?, ಯಾವುದು ಅಂತ್ಯ!? ಎನ್ನುವ ಗೌಜಿನಲ್ಲಿ ಮನಸ್ಸು ಅದೇನೋ ತಾತ್ಪರ್ಯವಿಲ್ಲದ ತತ್ವವನ್ನು ಕೆಕ್ಕರಿಸಿ ಓಡಿಸಿಕೊಂಡು ಹೋಗಿ ಹುಚ್ಚನನ್ನಾಗಿಸುತ್ತಿದೆ...

ಥೂ... ಏನಿದು!? ಯೋಚಿಸಲೇಬಾರದಿತ್ತು, ಆದರೂ ಯೋಚನೆ ಬರುತಿದ್ಯಲ್ಲಾ..! ಏನೇ ಯೋಚಿಸಿದರೂ, ಎಷ್ಟೆÃ ಸಂಪರ್ಕಕ್ಕೆ ಸಿಗದೇ ಓಡಾಡಿದರೂ ಉತ್ತರವೇ ಸಿಗದೆ, ಒಮ್ಮೆ ಸರಿ ಎನಿಸಿದ್ದು ಇನ್ನೊಮ್ಮೆ ತಪ್ಪೆನಿಸಿ, ಒಮ್ಮೆ ತಪ್ಪೆನಿಸಿದ್ದು, ಇನ್ನೊಮ್ಮೆ ಸರಿಯೆನಿಸಿ, ಅಂತಿಮವಾಗಿ ಸರಿ ಯಾವುದು!?, ತಪ್ಪಾö್ಯವುದು!!, ಎನ್ನುವ ನಿಲುವೇ ಸಿಗದೆ ಶೂನ್ಯಭಾವಕ್ಕೆ ಜಾರುವ ಮನಸ್ಸಿನ ಇಶಾರೆಯೇ ಈ ಗಾಳಿಯಂತಿರುವ ಬದುಕು... ಈ ರೀತಿ ನಿಮಗೂ ಅನಿಸಿದ್ದರೆ ಈ ಅಂಕಣ ಓದಿ.

ಬದುಕೇ ಹಾಗೆ ಕಳೆದುಕೊಳ್ಳುವ ವಿಷಯದಲ್ಲೆÃ ನಮ್ಮನ್ನು ಯಾವಾಗಲೂ ಭಯಪಡಿಸುತ್ತಿರುತ್ತದೆ. ಅದಕ್ಕಾಗಿ ಏನೇನೋ ಮಾಡುತ್ತೆÃವೆ, ಸತ್ಯವನ್ನೆÃ ಮರೆಮಾಚಿ ಸುಳ್ಳಿನ ಸರಪಳಿಯನ್ನೆÃ ಕಟ್ಟುತ್ತೆÃವೆ. ಎಲ್ಲವೂ ತನಗೇ ಬೇಕು ಎಂಬ ಅಹಂನಲ್ಲಿ ಒದ್ದಾಡುತ್ತಾ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಕೊಂಚವಾದರೂ ತಾಗಿರುವ ಧೂಳನ್ನು ಒರೆಸಿಕೊಳ್ಳುವ ಇರಾದೆಯಲ್ಲಿ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ ಚಪ-ಚಪ ಚಡಪಡಿಸುತ್ತೆÃವೆ. ಸರಿಯಾಗಿ ನೆನಪಿಟ್ಟುಕೊಳ್ಳಿ; ಬದುಕು ಎರಡು ಧ್ರುವಗಳಲ್ಲಿ ಅಸ್ತಿತ್ವವನ್ನು ಹೊಂದಿದ್ದರೆ, ಮನಸ್ಸು ಒಂದು ಧ್ರುವದಲ್ಲಿ ಇರುತ್ತದೆ. ಮನಸ್ಸಿನ ಅತಿಯಾದ ತರ್ಕಬುದ್ಧಿಯಿಂದ ಬದುಕು ಅಸಂಬದ್ಧವೆನಿಸುತ್ತದೆ. ಬದುಕು ಕ್ರೂರವೆನಿಸುತ್ತದೆ. ಅನೇಕ ಹೋಲಿಕೆಗಳು ಮನದಲ್ಲಿ ಗರಿಗೆದರಿದಾಗ 'ಅನಾಗರಿಕ ನಾನು' ಎಂಬ ಸಹಜ ಮೌಡ್ಯ ತಲೆಯಾವರಿಸಿ ಬದುಕು 'ತಿಳಿಗೇಡಿತನ'ವಾಗುತ್ತದೆ. ಈ ಅಸ್ತಿತ್ವಕ್ಕಿಂತ, ಬದುಕಿಗಿಂತ ದೊಡ್ಡ ತಿಳಿಗೇಡಿ ನಿಮಗೆಲ್ಲಿಯೂ ಸಿಗಲು ಸಾಧ್ಯವಿಲ್ಲ ಅದಕ್ಕೆ, 'ಚಲನೆಯನ್ನು ಸ್ಥಿರದಂತೆ ಮತ್ತು ಸ್ಥಿರವನ್ನು ಚಲನೆಯಂತೆ ಪರಿಗಣಿಸು', ಎಂದು ಓಶೋ ನುಡಿಯುತ್ತಾರೆ.

ಹೌದು! ನಾನು ಮೇಲೆ ಪ್ರಾರಂಭದಲ್ಲಿ ಬರೆದ ಒಂದಿಷ್ಟು ಪದಗಳು ನಿಮಗೆ ನೋವನ್ನು, ಮುಜುಗರವನ್ನು, ನಿಮ್ಮೊಳಗಿನ ಒಳ ಮನಸ್ಸಿನ ತಾತ್ಪರ್ಯಕ್ಕೆ ಸ್ಪರ್ಶವನ್ನು ನೀಡಿರಬಹುದು. ನನ್ನ ಪ್ರಕಾರ ಹಾಗೆ ಯೋಚಿಸುವುದು ತಪ್ಪಲ್ಲ. ಕೆಟ್ಟದ್ದು ಕೊಳಚೆ ಎಂದು ಕೊಂಡರೆ ನಮ್ಮ ಜನನವೂ ಆಗುತ್ತಿರಲಿಲ್ಲ ನೆನಪಿಟ್ಟುಕೊಳ್ಳಿ. ಈ ಯೋಚನಾ ಲಹರಿಗಳಿಗೆ ಸರಿಯಾದ ಉತ್ತರಗಳು ಸಿಗದಿದ್ದರೂ, ನಿಮ್ಮೊಳಗೆ ಹೊಸ ಜ್ಞಾನೋದಯ ಬೆಳೆಯಲು ಕಾರಣೀಭೂತವಾಗುತ್ತದೆ, ನಿಮ್ಮನ್ನು ಹೊಸ ನೆಲೆಗೆ ದಾಟಿಸುತ್ತವೆ ಮತ್ತು ನಿಮ್ಮ ಅಹಂಗಳ ಅರಿವಿಗೂ ದಾರಿಯಾಗುತ್ತದೆ ಎನ್ನುವುದರಲ್ಲಿ ಯಾವ ಮೌಢ್ಯವಿಲ್ಲ.


ಒಬ್ಬರು ವೃದ್ಧರಿರುತ್ತಾರೆ. ಅವರ ವೃದ್ಧಾಪ್ಯವನ್ನ ಸತ್ಯವೆನ್ನುತ್ತೆÃವೆ. ಆದರೆ ಸತ್ಯವೇನೆಂದು ನಮಗೆ ಸರಿಯಾಗಿ ತಿಳಿದೇ ಇರುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ಯಾರೂ ವೃದ್ಧರಲ್ಲ, ಯಾರೂ ಯುವಕರಲ್ಲ. ಅಂತರಾಳ ಎನ್ನುವುದು ಎಂದಿಗೂ ಚಿರನೂತನ. ಕೇವಲ ಬಾಹ್ಯದ ಆಕಾರವು ಬದಲಾಗುತ್ತಿರುತ್ತದೆ ಅಷ್ಟೆ. ಈ ಶರೀರ ಕೇವಲ ಒಂದು ಉಡುಪು ಅಷ್ಟೆ. ಶೂನ್ಯ ಜಗತ್ತಿನಲ್ಲಿ ಉಂಟಾಗುವ ಬದಲಾವಣೆಗಳನ್ನು ನಾವು ಅಜ್ಞಾನದಿಂದ ಸತ್ಯವೆಂದುಕೊಳ್ಳುತ್ತಿದ್ದೆÃವೆ. ಸತ್ಯಕ್ಕಾಗಿ ಹುಡುಕಾಡಬಾರದು, ಅಭಿಪ್ರಾಯಗಳಿಗೆ ಅಂಟಿಕೊಳ್ಳಲೂಬಾರದು. ನಿಮಗನಿಸಿದಂತೆ ನೀವು ಯೋಚಿಸಿ, ನಿಮಗನಿಸಿದಂತೆ ಬದುಕಿ ಆದರೆ ಎರಡೂ ಉತ್ತಮ ಹಾದಿಯಲ್ಲಿರಲಿ.

ಸದಾ ವರ್ತಮಾನದಲ್ಲಿರೋಣ, ಕಟ್ಟ ಕಡೆÉಯ ಸಾಕ್ಷಾತ್ಕಾರ ಇದೆ ಎಂದು ನಂಬೋಣ. ಹೌದು-ಅಲ್ಲ, ಗೌಜು-ಗದ್ದಲ, ನಂಬಿಕೆ-ಬಂಧನ, ದುಃಖ-ದುಗುಡ ಬಿಟ್ಟರೆ ಬೇರೆ ಏನಿದೆ, ಎನೇ ಇದ್ದರೂ ಅದು ಅವನದಾಗಿರಲಿ, ನಮ್ಮ ಸಮಸ್ಯೆಗಳೆಲ್ಲ ದೇವರ ಸಮಸ್ಯೆಯಾಗಲಿ, ಬದುಕನ್ನು ಸಂತೋಷಿಸೋಣ, ಬಂದದ್ದನ್ನು ಬಂದಹಾಗೆ ಅನುಭವಿಸೋಣ, ಹಾಡಿ-ನರ್ತಿಸಿ ಭಾವೋತ್ಕರ್ಷಿಸೋಣ...
ಆದರೂ ಅದೇನೋ ಇನ್ನೂ ತಲೆಯೊಳಗೆ ಕೆರೆಯುತ್ತಿದ್ಯಾ!?
ಯಾವುದಕ್ಕೂ ಮತ್ತೊಮ್ಮೆ ಮೇಲಿಂದ ಓದಿ... ಬರೆದ ನನಗೂ ಯಾಕೋ ಮತ್ತೆ ತಲೆ ಕೆಡುತ್ತಿದೆ ಅನಿಸುತ್ತಿದೆ... ಇನ್ನೆÃನನ್ನೊÃ ಬೆನ್ನತ್ತಿ ಹೊರಡಬೇಕನ್ನಿಸುತ್ತಿದೆ... ಹೊರಡ್ತಿÃನಿ ಬೈ... ಬೈ..!